ಪರಮ ಪೂಜ್ಯ ಶ್ರೀ ಸ್ವಾಮಿ ಹರ್ಷಾನಂದಜಿಯವರ ಒಂದು ಪತ್ರ
----------------------------------------------------
ಮೊನ್ನೆಯಷ್ಟೇ ಪರಮಪೂಜ್ಯ ಶ್ರೀ ಸ್ವಾಮಿ ಹರ್ಷಾನಂದಜಿಯವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಅಮರರಾದರು. ಮಹಾನ್ ವಿದ್ವಾಂಸರೂ, ತಪಸ್ವಿಗಳೂ ಆಗಿದ್ದ ಅವರು ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದರು. ಅಂತಹ ಮಹನೀಯರ ಕೈಬರಹದ ಅಮೂಲ್ಯ ಪತ್ರವಿದು.
ಇದು 27 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ಬರೆದಿರುವುದು. ತುಮಕೂರಿನ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಸಭಾದಿಂದ 1994 ರಲ್ಲಿ ಆಚರಿಸಲಾದ ಶ್ರೀ ಶಂಕರ ಜಯಂತಿಗೆ ಪೂಜ್ಯ ಸ್ವಾಮೀಜಿಯವರು ಆಶೀರ್ವಾದ ಪೂರ್ವಕವಾಗಿ ತಮ್ಮ ಸ್ವಹಸ್ತಾಕ್ಷರದಿಂದ ಬರೆದಿದ್ದ ಪತ್ರವಿದು. ನಮ್ಮ ಸಂಗ್ರಹದಲ್ಲಿ ಲಭಿಸಿದ ಅಮೂಲ್ಯವಾದ ಈ ಪತ್ರವನ್ನು ತಾವೆಲ್ಲರೂ ನೋಡಿ, ಓದಿ ಆನಂದಿಸುವಂತಾಗಲೆಂಬುದು ನಮ್ಮ ಶ್ರೀ ಶಂಕರ ಜಯಂತಿ ಸಭಾದ ಆಶಯ. (ದಿ.14-01-2021, ಗುರುವಾರ, ಸಂಕ್ರಾಂತಿ ).

No comments:
Post a Comment