Sunday, January 17, 2021

H H Sri Swamy Purushotthamanandaji's Letter

 ಪರಮ ಪೂಜ್ಯ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಆ ಒಂದು ಪತ್ರ

ಶ್ರೀ ರಾಮಕೃಷ್ಣ ಮಠದ ಹಿರಿಯ ಸಂನ್ಯಾಸಿಗಳಾಗಿದ್ದ, ವಾಗ್ಮಿಗಳಾಗಿ ಹಾಗೂ ಗ್ರಂಥಕರ್ತರಾಗಿ ಕೀರ್ತಿಶಾಲಿಗಳಾಗಿದ್ದ ಪರಮ ಪೂಜ್ಯ ಶ್ರೀ ಸ್ವಾಮಿ ಪುರಷೋತ್ತಮಾನಂದಜಿಯವರು 1994 ರಲ್ಲಿ ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ ಶಂಕರ ಜಯಂತಿ ಸಭಾದ ಅಧ್ಯಕ್ಷರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಬರೆದಿದ್ದ ಒಂದು ಪತ್ರವಿದು. ಆಗ ಅವರು ಕೊಡಗು ಜಿಲ್ಲೆ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿದ್ದರು.


ಸಹೃದಯರೆಲ್ಲರೂ ಪೂಜ್ಯ ಸ್ವಾಮೀಜಿಯವರ ಕೈಬರಹ ನೋಡಿ. ಬರಹದ ಶೈಲಿಯನ್ನು ಓದಿ ಆನಂದಿಸುವಂತಾಗಲಿ.

A letter from H H Sri Swamy Purushotthamanandaji



A Letter by H.H. Sri Swamy Harshanandaji, Ramakrishna Mutt, Bengaluru

ಪರಮ ಪೂಜ್ಯ ಶ್ರೀ ಸ್ವಾಮಿ ಹರ್ಷಾನಂದಜಿಯವರ ಒಂದು ಪತ್ರ
----------------------------------------------------
ಮೊನ್ನೆಯಷ್ಟೇ ಪರಮಪೂಜ್ಯ ಶ್ರೀ ಸ್ವಾಮಿ ಹರ್ಷಾನಂದಜಿಯವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಅಮರರಾದರು. ಮಹಾನ್ ವಿದ್ವಾಂಸರೂ, ತಪಸ್ವಿಗಳೂ ಆಗಿದ್ದ ಅವರು ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದರು. ಅಂತಹ ಮಹನೀಯರ ಕೈಬರಹದ ಅಮೂಲ್ಯ ಪತ್ರವಿದು.
ಇದು 27 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ಬರೆದಿರುವುದು. ತುಮಕೂರಿನ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಸಭಾದಿಂದ 1994 ರಲ್ಲಿ ಆಚರಿಸಲಾದ ಶ್ರೀ ಶಂಕರ ಜಯಂತಿಗೆ ಪೂಜ್ಯ ಸ್ವಾಮೀಜಿಯವರು ಆಶೀರ್ವಾದ ಪೂರ್ವಕವಾಗಿ ತಮ್ಮ ಸ್ವಹಸ್ತಾಕ್ಷರದಿಂದ ಬರೆದಿದ್ದ ಪತ್ರವಿದು. ನಮ್ಮ ಸಂಗ್ರಹದಲ್ಲಿ ಲಭಿಸಿದ ಅಮೂಲ್ಯವಾದ ಈ ಪತ್ರವನ್ನು ತಾವೆಲ್ಲರೂ ನೋಡಿ, ಓದಿ ಆನಂದಿಸುವಂತಾಗಲೆಂಬುದು ನಮ್ಮ ಶ್ರೀ ಶಂಕರ ಜಯಂತಿ ಸಭಾದ ಆಶಯ. (ದಿ.14-01-2021, ಗುರುವಾರ, ಸಂಕ್ರಾಂತಿ ).