Monday, October 19, 2009

Shankara Jayanthi: Memories in Pictures


Sanskrit Vidwan Sri Ramakrishna Bhatta is addressing a gatherting. Vijaya Vani Editor Sri H.R. Gundu Rao, Sri Venkanna, Sri Seetharamaiah, Sri Gopalakrishna, Sri Venkappaiah , Sri Shamachar and others also seen.

During Sri Shankara Jayanthi Celebration, V.S.Ramachandran ( Second form left) with his team . Sri Kumar, Sri Puttannaiah, Sri Nagabhushana Rao, Sri Nanjundappa, Sri Lakshminarayana ( Appaiah ) are also seen.







Karnataka Vocal recital by Vidwan T.K.Ramamurthy. He was accompanied by Vidwan Honnanjachr in Harmonium and Vidwan T.H.Anandaramu in Mrudangam.







Famous Vidwan Prof. Varadadeshikachar ( Right) is addressing in the Sabha function . (From left) Vidwan Sri Rama krishna Bhatta, Famous Vidwan Prof. S.K. Ramacharndra Rao also seen.


Well Known Sanskrit Scholar Dr. N. Rangantha Sharma addressing a function of Sabha.






Famous Sanskrit Vidwan of Tumkur Sri Yagnanarayana Shasthri and others participated in a Special Homa arranged at Sri Lakshmikantha Temple, Chickpet, Tumkur by V.S.Ramachandran.



Kanchi Jagadguru H.H. Sri Sri Jayendra Sarasvathi Swamiji visited Tumkur during his PADAYATRA on 13-05-1979, made his camp at Divan Purnaiah Choultry, at Chickpet. At that time he gave Asheervachanam in Sri Shankara Jayanthi Sabha programme, arranged at Sri Lakashmikantha Swamy Temple.

Sunday, October 4, 2009

Founder President’s View

ಶ್ರೀ ಶಂಕರ ಜಯಂತಿ ಸಭಾ: ಒಂದು ಹಿನ್ನೋಟ

1966 ನೇ ಇಸವಿ. ಆಗಿನ ದ್ವಾರಕಾ ಪೀಠಾಧಿಪತಿಗಳಾಗಿದ್ದ ಪ.ಪೂ.ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ಸಚ್ಚಿದಾನಂದ ತೀರ್ಥ ಮಹಾಸ್ವಾಮಿಗಳು ತಮ್ಮ ಕರ್ನಾಟಕ ಪ್ರವಾಸ ನಿಮಿತ್ತ ತುಮಕೂರಿಗೂ ಭೇಟಿಯಿತ್ತಿದ್ದರು. ಆ ಸಂದರ್ಭದಲ್ಲಿ ಆಶೀರ್ವಚನ ನೀಡುತ್ತ ಅವರು ಹೀಗೆಂದರು ; “ಅಜ್ಞಾನ ಮತ್ತು ಸ್ವಾರ್ಥದಿಂದ ಅಂಧಕಾರದಲ್ಲಿ ಮುಳುಗಿರುವ ಸಮಾಜದಲ್ಲಿ ಶ್ರೀ ಶಂಕರರ ತತ್ವಗಳನ್ನು ಪ್ರಚಾರ ಮಾಡಿ, ಧರ್ಮಜಾಗೃತಿ ಮೂಡಿಸಬೇಕು. ಜಗತ್ತಿಗೇ ಬೆಳಕು ನೀಡುವಂತಹ ಶ್ರೀ ಶಂಕರರ ತತ್ವಾಮೃತವನ್ನು ಪ್ರತಿಯೊಬ್ಬರೂ ನಿತ್ಯಜೀವನದಲ್ಲಿ ಅನುಸರಿಸುವಂತಾಗಬೇಕು. ಅದಕ್ಕೆ ಪ್ರೇರಣೆ ನೀಡಲು ಶ್ರೀ ಶಂಕರ ಜಯಂತಿಯನ್ನು ಮನೆಮನೆಗಳಲ್ಲೂ ಆಚರಿಸಬೇಕು. ಅದಕ್ಕಾಗಿ ಉತ್ಸಾಹಿ ಯುವಕರು ಶ್ರದ್ಧಾ ಭಕ್ತಿಯಿಂದ ಜ್ಞಾನಾರ್ಜನೆ ಮಾಡಿ, ಧರ್ಮ ರಕ್ಷಣೆಯ ಕಾರ್ಯದಲ್ಲಿ ಮುಂದಾಗಬೇಕು.“ ಶ್ರೀಗಳ ಈ ನುಡಿ ಸಮಾನಮನಸ್ಕರಾದ ಕೆಲವರ ಮನಮುಟ್ಟಿತು. ಪ್ರೇರಣೆ ನೀಡಿತು. 1968 ರಲ್ಲಿ ಶ್ರೀ ಶಂಕರ ಜಯಂತಿ ಆಚರಣೆಯೊಂದಿಗೆ “ಶ್ರೀ ಶಂಕರ ಜಯಂತಿ ಸಭಾ“ ಉದಯವಾಯಿತು. ಜಯಂತಿಯ ಆಚರಣೆಯೊಂದಿಗೆ ವಿದ್ವಾಂಸರಿಂದ ನಿಯಮಿತವಾದ ಧಾರ್ಮಿಕ ಉಪನ್ಯಾಸ, ವೇದಾಂತ ತತ್ತ್ವ ಪ್ರಚಾರ ಕಾರ್ಯವೂ ಜೊತೆಜೊತೆಯಾಗಿ ಮುನ್ನಡೆಯಿತು. ಪ್ರಾತಃಸ್ಮರಣೀಯರಾದ ಶೃಂಗೇರಿಯ ಹಿಂದಿನ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಕಂಚಿ ಕಾಮಕೋಟಿ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು, ಮೈಸೂರಿನ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು, ಹೊಳೆನರಸೀಪುರದ ಶ್ರೀ ಯೋಗಾನಂದೇಶ್ವರ ಮಠದ ಶ್ರೀ ಗಣಪತಿ ಭಾರತಿ ಸ್ವಾಮಿಗಳು, ಬೆಂಗಳೂರಿನ ಶ್ರೀ ಪರಮಾನಂದ ಭಾರತಿ ಸ್ವಾಮಿಗಳು, ಸಂತ ಶ್ರೀ ಹರಿಹರಾನಂದ ಸರಸ್ವತಿ ಸ್ವಾಮಿಗಳು, ಶ್ರೀ ಸ್ವಾಮಿ ಕೃಷ್ಣಾನಂದಜಿರವರು ಮುಂತಾದ ಅನೇಕ ಯತಿವರ್ಯರು ಶ್ರೀ ಶಂಕರ ಜಯಂತಿ ಸಭಾದ ವೇದಿಕೆಯಲ್ಲಿ ಉಪಸ್ಥಿತರಿದ್ದು, ಆಶೀರ್ವದಿಸಿರುವುದು ಸಭಾಗೆ ಒದಗಿಬಂದ ಒಂದು ಸೌಭಾಗ್ಯವೇ ಸರಿ. ಅಂತೆಯೇ ನಾಡಿನ ಹೆಸರಾಂತ ವಿದ್ವಾಂಸರುಗಳು ಸಹ ಸಭಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉದ್ಬೋಧಕ ಉಪನ್ಯಾಸ ನೀಡಿರುವುದು ನಮ್ಮದೊಂದು ಹೆಗ್ಗಳಿಕೆ. ಖ್ಯಾತ ವಿದ್ವಾಂಸರುಗಳಾದ ಪ್ರೊ ಎಸ್.ಕೆ. ರಾಮಚಂದ್ರರಾವ್, ವಿದ್ವಾನ್ ಶ್ರೀ ಕೆ. ರಂಗನಾಥ ಶರ್ಮ, ಪ್ರೊ ಎಚ್.ಎಸ್.ವರದ ದೇಶಿಕಾಚಾರ್ಯ ರಂಗಪ್ರಿಯ ( ಪೂಜ್ಯ ಶ್ರೀ ರಂಗಪ್ರಿಯ ಮಹಾದೇಶಿಕ ಶ್ರೀಚರಣರು ) ಅವರು ಸಭಾದ ಕಾರ್ಯಕ್ರಮಗಳಲ್ಲಿ ಉಪನ್ಯಾಸವಿತ್ತಿರುವ ಪ್ರಮುಖರು ಎಂಬುದು ಹೆಮ್ಮೆಯ ವಿಷಯ. ಮಕ್ಕಳು, ಕರಣಿಕ ಶ್ರೀ ಟಿ.ಕೆ.ಪುಟ್ಟಣ್ಣಯ್ಯ ಮೊದಲಾದವರ ಸೇವೆ ಅಮೂಲ್ಯವಾದುದು.

ಅಷ್ಟೊಂದು ಸುದೀರ್ಘ ವರ್ಷಗಳ ಕಾಲ ನಿರಂತರವಾಗಿ ಉಚಿತವಾಗಿ ಧ್ವನಿವರ್ಧಕ ವ್ಯವಸ್ಥೆ ಮಾಡಿದ ಶ್ರೀ ವೆಂಕಟಪ್ಪ ಮತ್ತು ಮಕ್ಕಳು, ವಿದ್ಯುದ್ದೀಪಾಲಂಕಾರ ಮಾಡಿದ ಶ್ರೀ ನಂಜುಂಡಪ್ಪ, ಹೂವಿನ ವ್ಯಾಪಾರಿಗಳಾದ ಶ್ರೀ ಕೃಷ್ಣಪ್ಪ ಮತ್ತು ಶ್ರೀ ಪ್ರಸನ್ನ ಕುಮಾರ್, ಗಣಪತಿ ಪ್ರಿಂಟರ್ಸ್‌ನ ಶ್ರೀ ಸತ್ಯನಾರಾಯಣರಾಯರ ಸೇವಾ ಮನೋಭಾವವನ್ನು ಮರೆಯಲಸಾಧ್ಯ. ಇನ್ನು ಟಿ.ಎನ್. ನಾಗಭೂಷಣ ರಾವ್ ಮತ್ತು ಮಕ್ಕಳು, ಸೀತಾರಾಮಯ್ಯ ಮತ್ತು ಮಕ್ಕಳು, ಎಸ್.ಎನ್. ಶಂಕರನಾರಾಯಣ ಮತ್ತು ಅವರ ಸೋದರ ಶ್ರೀ ಎನ್.ಎಸ್. ಸೋಮಸುಂದರ್, ಶ್ರೀ ಎಚ್.ಎನ್. ಸುಧೀಂದ್ರ ಕುಮಾರ್. ಶ್ರೀ ಆರ್. ವೆಂಕಟೇಶ ಮೂರ್ತಿ, ಶ್ರೀ ಆರ್. ರಾಜೀವಲೋಚನ್, ಶ್ರೀ ರಂಗಸ್ವಾಮಿ , ಶ್ರೀ ಎಚ್.ಎಸ್. ರಾಘವೇಂದ್ರ ಮೊದಲಾದವರ ನಿಸ್ವಾರ್ಥ ಸೇವೆ ಸದಾ ಸ್ಮರಣೀಯವಾದುದು.
-ವಿ.ಎಸ್.ರಾಮಚಂದ್ರನ್, ಸಂಸ್ಥಾಪಕ ಅಧ್ಯಕ್ಷರು